ಹೌದು ನಮ್ಮೂರಿನ ಸರಕಾರಿ ಪ್ರೌಢಶಾಲೆಯಲ್ಲಿ 6ವರ್ಷ ದಿಂದ ಇಂಗ್ಲಿಷ್ ಶಿಕ್ಷಕರಿಲ್ಲದೆ ಪರಾಧಡುತಿದ್ದ ವಿದ್ಯಾರ್ಥಿಗಳಿಗೆ ನಮ್ಮೂರಿನ ಅದೇ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಒಂದು ದಿನದ ಹಾರ್ತಾಳ ಮಾಡಿದಾಗ ಶಿಕ್ಷಣ ಇಲಾಖೆಯ ಅಧಿಕಾರಿಗಳು ಆದ DDPI ಮತ್ತು BEO ರವರು ಬಂದು ಭರವಸೆ ಕೊಟ್ಟನಂತರ ಈ ವಿಷಯವನ್ನು ನಾವು ಗಳು enrichament of govt school ಗ್ರೂಪಿಗೆ ಕಳಿಸಿದಾಗ ಸ್ಲೆಟು ಬಳಪ ಫೌಂಡೇಶನ್ ನಿಂದ್ ನಮ್ಮೂರಿನ ಶಾಲೆಗೆ ಅತಿಥಿ ಶಿಕ್ಷಕರನ್ನು ತಗೆದುಕೊಳ್ಳಲು ತಿಳಿಸಿದರು ಅದೇ ರೀತಿ MA in English ಮತ್ತು BED ಮಾಡಿದ ಶಿಕ್ಷಕಿಯರನ್ನು ತಗೆದುಕೊಂಡು ಪಾಠ ಪ್ರಾರಂಭ ಮಾಡಿದ ಮೇಲೆ ಇಂದು ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ಬಾರಿ ಬದಲಾವಣೆಯಾಗಿದ್ದು ರವಿವಾರ ಕೂಡಾ ಹೆಚ್ಚಿನ ತರಗತಿಗಳನ್ನು ತಗೆದುಕುಳ್ಳುತ್ತಿದ್ದಾರೆ ನಾನೆ ಖುದ್ದಾಗಿ 10 ರಿಂದ 15ವಿದ್ಯಾರ್ಥಿಗಳ್ಳನ್ನು ಈ ವಿಷಯದ ಬಗ್ಗೆ ಪ್ರತಿ ವಾರ ಕೆಳೆದಾಗ ಅವರು ಖುಷಿಯಿಂದ ಹೇಳುತ್ತಾರೆ ಸ್ಲೆಟು ಬಳಪ ಫೌಂಡೇಶನ ಅವರಿಗೆ ತಮ್ಮ ತುಂಬು ಹೃದಯದ ಧನ್ಯವಾದಗಳ ಜೊತೆ ಕಣ್ಣಿನಲ್ಲಿ ಆನಂದ ಭಾಷ್ಪ ಬರುವುದನ್ನು ನಾನು ಕಣ್ಣಾರೆ ಕಂಡಿರುವೆನು
ಸ್ಲೆಟು ಮತ್ತು ಬಳಪ ಫೌಂಡೇಶನ್ ಗೆ ನನ್ನ ವೈಯಕ್ತಿಕ ಧನ್ಯವಾದಗಳು
ಇತಿ ನಿಮ್ಮವನದ ಕದಡಿ ಗ್ರಾಮದ ಯುವಕ ಮತ್ತು ಹಳೆಯ ವಿದ್ಯಾರ್ಥಿ
ಶಿವಕುಮಾರಗೌಡ ನೀಲನಗೌಡ ಚಿಕ್ಕನಗೌಡ್ರ
ಸ್ಲೇಟು ಮತ್ತು ಬಳಪ ಸಂಸ್ಥೆಯವರಿಗೆ ತುಂಬ ಹೃದಯದ ಧನ್ಯವಾದಗಳು ಅವರಿಗೆ ಯಾವ ರೀತಿ ಧನ್ಯವಾದಗಳು ಹೇಳ ಬೇಕು ತಿಳಿಯುತ್ತಿಲ್ಲ ಕಾರಣ ಅವರು ನಮ್ಮೂರಿನ ಶಾಲೆಗೆ ಅತಿಥಿ ಇಂಗ್ಲಿಷ್ ಶಿಕ್ಷಕರ ನೇಮಕ ಮಾಡಿ ವಿದ್ಯಾರ್ಥಿಗಳನ್ನು SSLC ಪರೀಕ್ಷೆ ಉತ್ತಿರ್ಣ ರಾಗಲು ಸಹಕರಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಹಿಂದಿನ ವರ್ಷ್ ಒಟ್ಟು 44% ಪಾಸಾದ ವಿದ್ಯಾರ್ಥಿಗಳು ಈ ವರ್ಷದ ಒಟ್ಟು 93.63% ಆಗಿದೆ ಒಬ್ಬ ವಿದ್ಯಾರ್ಥಿ 90 ಅಂಕ ಇಂಗ್ಲಿಷ್ ವಿಷಯದಲ್ಲಿ ಪಡೆದಿರುತ್ತಾಳೆ ಈ ಸರ 94% ನೊಂದಿಗೆ ಶಾಲೆಗೆ ಪ್ರಥಮ ಬಂದಿರುತ್ತದೆ.