About Founder
About Founder
ಪರಿಚಯ: ಭಾರ್ಗವಿ ಹೇಮಂತ್, ಬೆಂಗಳೂರು
https://www.xn--3rc1bwb1aa1h1bzg.com/
ಅಥವ
ತಂದೆ: ಡಿ.ವಿ. ಶ್ರೀನಿವಾಸ ತಾಯಿ: ಶ್ಯಾಮಲಾ ಶ್ರೀನಿವಾಸ
ಹುಟ್ಟೂರು: ನ. ರ. ಪುರ, ಚಿಕ್ಕಮಗಳೂರು ಜಿಲ್ಲೆ ಶಿಕ್ಷಣ: MBA Finance ಉದ್ಯೋಗ: ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯೋಗಿ
ಸೇವಾನುಭವ: ಭಾರ್ಗವಿ ಹೇಮಂತ್ ಅವರು ಕಾರ್ಪೊರೇಟ್ ಕ್ಷೇತ್ರದಲ್ಲಿ ಸಕ್ರಿಯರು. ಹಣಕಾಸು, ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ, ಆಡಳಿತ ಕ್ಷೇತ್ರದಲ್ಲಿ ಪರಿಣತರು.
ಅಮೆರಿಕ, ದುಬೈ, ಸಿಂಗಾಪುರ ಸಹಿತ ವಿಶ್ವದ ವಿವಿಧ ಭಾಗಗಳ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳ ನಿರ್ಣಾಯಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡಪರ ಕಾರ್ಯಕ್ರಮಗಳು, ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆ ಇವರ ಆಸಕ್ತಿಯ ಕ್ಷೇತ್ರಗಳು.
A Kannadabhimaani, Kannadathi, IT Employee and Founder Sletu Balapa Foundation, We-Shwaasa, Kanakapura Raste Kannada balaga
ಇಮೇಲ್: sletubalapa@gmail.com
ಬೆಂಗಳೂರಿನ ಕನಕಪುರ ರಸ್ತೆ ಪ್ರದೇಶದಲ್ಲಿ ಕನ್ನಡ ಕಟ್ಟುವ ಕೆಲಸದಲ್ಲಿ ನಿರತವಾಗಿರುವ ಸಂಘಟನೆಯಿದು. ಭಾರ್ಗವಿ ಹೇಮಂತ್ ಈ ಸಂಘಟನೆಯ ಸಂಸ್ಥಾಪಕರಾಗಿ ನೇತೃತ್ವ ವಹಿಸಿದ್ದಾರೆ. ಕನ್ನಡದ ಬಗ್ಗೆ ನಿರಂತರ ಜಾಗೃತಿ ಮೂಡಿಸುವ ಉದ್ದೇಶದಿಂದ ಜನರಿಗೆ ಸಾಂಕೇತಿಕವಾಗಿ ಕನ್ನಡ ಕಂಕಣ ಕಟ್ಟುವ ಕಾರ್ಯಕ್ರಮ, ಬ್ಯಾಂಕ್, ಐಟಿ ಕಂಪನಿಗಳಲ್ಲಿ ಕನ್ನಡ ಬಳಸುವ ಕುರಿತ ಜಾಗೃತಿ ಅಭಿಯಾನ ನಡೆಸಿದೆ. ಕನ್ನಡದ ನಾಡು, ನುಡಿ, ಭಾವವನ್ನು ಪ್ರತಿನಿಧಿಸುವ ಶ್ರೀಸಾಮಾನ್ಯ ಕನ್ನಡಿಗನ ಚಿತ್ರ ರಚನೆ ಮಾಡಿಸಿದೆ. ಕಲಾವಿದರನ್ನು ಪ್ರೋತ್ಸಾಹಿಸಲು ಜಾನಪದ ಉತ್ಸವ ಹಮ್ಮಿಕೊಂಡಿದೆ. ‘ಕನಕಪುರ ರಸ್ತೆ ಹಸಿರು ರಾಜ ರಸ್ತೆ’ ಪುಸ್ತಕ ಹೊರ ತಂದಿದೆ. ಈ ಕೃತಿಯ ಸಾವಿರಾರು ಪ್ರತಿಗಳು ಮಾರಾಟವಾಗಿವೆ. ಉದಯೋನ್ಮುಖ ಲೇಖಕರ ಕೃತಿಗಳು ಈ ಬಳಗದ ಮೂಲಕ ಬಿಡುಗಡೆಯಾಗಿವೆ. ತಮ್ಮ ಬಡಾವಣೆಯ ಪೌರ ಕಾರ್ಮಿಕರಿಗೆ ‘ಕನ್ನಡದಲ್ಲಿ ಮಾತನಾಡಿ’ ಎಂಬ ಬರಹವುಳ್ಳ ಸಮವಸ್ತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಿದೆ. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ಅದ್ದೂರಿ ಆಚರಣೆ ಮಾಡುತ್ತಿದೆ. ಕನ್ನಡ ಕಟ್ಟುವ ಕೆಲಸದಲ್ಲಿ ನಿರತರಾಗಿರುವವರಿಗೆ ಅಪ್ರತಿಮ ಕನ್ನಡಿಗ, ಅಪ್ರತಿಮ ಕನ್ನಡತಿ ಮತ್ತು ಉದಯೋನ್ಮುಖ ಕನ್ನಡಿಗ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಹಲವರಿಗೆ ಉದ್ಯೋಗ ಕಲ್ಪಿಸಲು ನೆರವಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜೊತೆಗಿನ ಎಲ್ಲ ಕನ್ನಡಪರ ಕಾರ್ಯಕ್ರಮಗಳಲ್ಲಿ ಕನಕಪುರ ರಸ್ತೆ ಕನ್ನಡ ಬಳಗವು ಸಕ್ರಿಯವಾಗಿ ಭಾಗವಹಿಸಿದೆ.
ಸೇವಾ ಸಂಸ್ಥೆಗಳು:
ಸ್ಲೇಟು–ಬಳಪ: ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಶೈಕ್ಷಣಿಕ ಪರಿಕರಗಳನ್ನು ಒದಗಿಸುವುದು, ಶಿಕ್ಷಕರನ್ನು ಒದಗಿಸುವುದು ಸೇರಿದಂತೆ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕೊಡಿಸುವಲ್ಲಿ ಭಾರ್ಗವಿ ಹೇಮಂತ್ ಅವರು ಸ್ಥಾಪಿಸಿದ ಸ್ಲೇಟು–ಬಳಪ ಸಂಸ್ಥೆ ಶ್ರಮಿಸುತ್ತಿದೆ. ಸದ್ಯ 7 ಶಾಲೆಗಳಿಗೆ ಇಂಗ್ಲಿಷ್ ಶಿಕ್ಷಕರನ್ನು ಒದಗಿಸಿದೆ. ದಾನಿಗಳ ನೆರವಿನಿಂದ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವಲ್ಲಿ ಸಕ್ರಿಯವಾಗಿದೆ. ಇದರ ಪರಿಣಾಮವಾಗಿ ಸ್ಲೇಟು ಬಳಪದ ಕಾರ್ಯಜಾಲದಲ್ಲಿರುವ ಶಾಲೆಗಳ ಫಲಿತಾಂಶ ಗಣನೀಯವಾಗಿ ವೃದ್ಧಿಸಿದೆ. ಆನ್ಲೈನ್ ಮೂಲಕವೂ ಕನ್ನಡ– ಇಂಗ್ಲಿಷ್ ಕಲಿಸುವಿಕೆ, ಕನ್ನಡೇತರರಿಗೆ ಕನ್ನಡ ಕಲಿಸುವಲ್ಲಿ ಸ್ಲೇಟು–ಬಳಪ ಸಕ್ರಿಯವಾಗಿದೆ.
We-ಶ್ವಾಸ: ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ನಿರ್ಗತಿಕರಿಗೆ ಆಹಾರ ಮತ್ತು ವೈದ್ಯಕೀಯ ಸಹಾಯವನ್ನು ‘We-ಶ್ವಾಸ’ ಒದಗಿಸಿದೆ. ನಮ್ಮ ಪ್ರದೇಶ ನಮ್ಮ ಜವಾಬ್ದಾರಿ ಮತ್ತು ನಿಮ್ಮ ಆರೋಗ್ಯದ ಸುರಕ್ಷತೆಗಾಗಿ… ಎಂಬ ಧ್ಯೇಯ ವಾಕ್ಯದೊಂದಿಗೆ ಕೆಲಸ ಮಾಡಿದೆ.
ಬಿಬಿಎಂಪಿ ಅಧಿಕಾರಿಗಳ ಸಹಾಯದಿಂದ ಕನಕಪುರ ರಸ್ತೆಯಲ್ಲಿರುವ ಕೋವಿಡ್ ಸೋಂಕಿತ ಕುಟುಂಬಗಳ ನಿಖರ ಮಾಹಿತಿ ಸಂಗ್ರಹಿಸಿ ವೈದ್ಯಕೀಯ ಕಿಟ್ಗಳು, ಲಸಿಕೆ ಹಾಕಿಸುವುದು, ಪಡಿತರ ಕಿಟ್ಗಳು, ಆಹಾರ ವಿತರಣೆ, ವೈದ್ಯಕೀಯ ತುರ್ತು ಹಾಸಿಗೆ ವ್ಯವಸ್ಥೆ, ಶವಸಂಸ್ಕಾರದವರೆಗೂ ನೆರವು ನೀಡಿದೆ. ಸಂಕಷ್ಟದಲ್ಲಿದ್ದವರಿಗೆ ಮಾನಸಿಕ ಬೆಂಬಲ ನೀಡಿದೆ.
ಪ್ರಶಸ್ತಿ, ಗೌರವಗಳು: ಅತ್ಯುತ್ತಮ ಸಂಘಟಕಿ: ಕನ್ನಡ ಜಾಗೃತಿ, ಸಮಾಜ ಸೇವೆ, ಶಿಕ್ಷಣ ಕ್ಷೇತ್ರದ ಸುಧಾರಣೆ, ಆರೋಗ್ಯ ನೆರವು, ಹಣಕಾಸು ಜಾಗೃತಿ ಕಾರ್ಯಕ್ರಮಗಳನ್ನು ಭಾರ್ಗವಿ ಹೇಮಂತ್ ನಿರಂತರವಾಗಿ ಆಯೋಜಿಸಿದ್ದಾರೆ. ಈ ಸೇವಾ ಚಟುವಟಿಕೆಗಳನ್ನು ಗಮನಿಸಿ. 2021ರಲ್ಲಿ Proud Indian ಪ್ರಶಸ್ತಿ ಅವರಿಗೆ ಲಭಿಸಿದೆ. ಬೆಂಗಳೂರಿನ ಕನ್ನಡ ಚಂದ್ರ ಪ್ರಶಸ್ತಿ ಪ್ರದಾನ ಸಮಿತಿಯು 2022ನೇ ಸಾಲಿನ ಕನ್ನಡ ಚಂದ್ರ ಪ್ರಶಸ್ತಿ ನೀಡಿ ಗೌರವಿಸಿದೆ.
ದೇಶ ವಿದೇಶಗಳ ಪ್ರತಿಷ್ಠಿತ ಸಂಘಟನೆಗಳು, ಕಂಪನಿಗಳು ಭಾರ್ಗವಿ ಅವರನ್ನು ಸನ್ಮಾನಿಸಿವೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿರುವ ಕನ್ನಡ ಉದ್ಯೋಗ ಪರ್ವ, ಕರ್ನಾಟಕದ ಉತ್ಪನ್ನಗಳು, , ಕನ್ನಡ ಚಂದ್ರ ಸೇರಿದಂತೆ ವಿವಿಧ ಪುಸ್ತಕಗಳಲ್ಲಿ ಭಾರ್ಗವಿ ಅವರ ಹೆಸರು ಉಲ್ಲೇಖಗೊಂಡಿದೆ. ಪ್ರಾಧಿಕಾರ ಹಮ್ಮಿಕೊಂಡಿರುವ ಕನ್ನಡ ಭಾಷೆ, ಭಾವ ಬದುಕು ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳಲ್ಲಿ ಭಾರ್ಗವಿ ಹಾಗೂ ಅವರ ನೇತೃತ್ವದ ಕನಕಪುರ ರಸ್ತೆ ಕನ್ನಡ ಬಳಗ ಅವರು ಸಕ್ರಿಯವಾಗಿದೆ.